ನಿಯಮಗಳು

 • ಈ ಸ್ಪರ್ಧೆಯು ಭಾರತೀಯ ನಿವಾಸಿಗಳಿಗೆ ಮಾತ್ರ.
 • ನಿಮ್ಮ ತಂಡವನ್ನು ರಚಿಸಲು ನಿಮಗೆ 1,200 ಪಾಯಿಂಟ್‌ಗಳ ಬಜೆಟ್ ನೀಡಲಾಗಿದೆ.
 • ಪ್ರತಿ ತಂಡವು 11 ಆಟಗಾರರನ್ನು ಹೊಂದಿರಬೇಕು.
 • ಪ್ರತಿ ಆಟಗಾರ ಬೆಲೆಯನ್ನು ಹೊಂದಿರುತ್ತಾನೆ ಮತ್ತು ನಿಮ್ಮ ತಂಡದಲ್ಲಿನ ಆಟಗಾರರ ಒಟ್ಟು ಮೌಲ್ಯವು 1,200 ಪಾಯಿಂಟ್‌ಗಳ ಬಜೆಟ್ ಅನ್ನು ಮೀರಬಾರದು.
 • ನೀವು ಈ ರೀತಿಯಲ್ಲಿ ಆಯ್ಕೆ ಮಾಡಬೇಕಾಗಿರುತ್ತದೆ:
  4-5 ಬ್ಯಾಟ್ಸ್‌ಮನ್2-4 ಬೌಲರ್‌ಗಳು2-4 ಆಲ್‌ರೌಂಡರ್‌ಗಳು1 ವಿಕೆಟ್‌ಕೀಪರ್
 • ನಿಮಗೆ 30 ಪರ್ಯಾಯಗಳನ್ನು ನೀಡಲಾಗುತ್ತದೆ, ಅವುಗಳನ್ನು ನೀವು ನಾಕ್ಔಟ್ ಪಂದ್ಯಗಳನ್ನು ಒಳಗೊಂಡಂತೆ ಇಡೀ ಪಂದ್ಯಾವಳಿಯಾದ್ಯಂತ ಬಳಸಬಹುದು
 • ನೀವು ಪ್ರಾರಂಭದಲ್ಲಿ ಮಾಡುವ ತಂಡವು ಯಾವುದೇ ಪರ್ಯಾಯಗಳನ್ನು ಕಡಿಮೆಗೊಳಿಸುವುದಿಲ್ಲ. ನಿಮ್ಮ ಮೊದಲ ಮಾನ್ಯ ತಂಡವನ್ನು ಉಳಿಸಿದ ನಂತರ ಮಾಡುವ ಯಾವುದೇ ಬದಲಾವಣೆಗಳಿಗೆ ಬಾಕಿ ಉಳಿದಿರುವ ಪರ್ಯಾಯಗಳ ಸಂಖ್ಯೆಯಲ್ಲಿ ಕಡಿತಗೊಳಿಸಲಾಗುತ್ತದೆ.
 • ದಿನ ಪಂದ್ಯ ಪ್ರಾರಂಭವಾಗುವ 1 ನಿಮಿಷದ ಮೊದಲು ಎಲ್ಲಾ ಪರ್ಯಾಯಗಳನ್ನು ಮಾಡಬೇಕಾಗಿರುತ್ತದೆ.
 • ನಿಮ್ಮ ತಂಡವನ್ನು ಪಂದ್ಯ ನಡೆಯುವ ಮಧ್ಯದಲ್ಲಿ ನೀವು ಬದಲಾಯಿಸಲು ಸಾಧ್ಯವಿಲ್ಲ. ಪಂದ್ಯ ನಡೆಯುವ ಸಮಯದಲ್ಲಿ ನಿಮ್ಮ ತಂಡದಲ್ಲಿ ಮಾಡಿದ ಯಾವುದೇ ಬದಲಾವಣೆಗಳು ಪಂದ್ಯ ಮುಕ್ತಾಯವಾದ ನಂತರ ಪ್ರತಿಬಿಂಬಿಸುತ್ತದೆ.
 • 11 ಆಟಗಾರರಿರುವ ಪ್ರತಿ ತಂಡವು ನಾಯಕನನ್ನು ಹೊಂದಿರಬೇಕು.
 • ನಾಯಕರು ಪಂದ್ಯದಲ್ಲಿ ಎರಡರಷ್ಟು ಅಂಕಗಳನ್ನು ಪಡೆಯುತ್ತಾರೆ (ಧನಾತ್ಮಕ ಅಥವಾ ಋಣಾತ್ಮಕ ಯಾವುದೇ ಇದ್ದರೂ).
 • ಪ್ರತಿ ಪಂದ್ಯದ ಮೊದಲು ನಿಮ್ಮ ತಂಡದಲ್ಲಿ ನಿಮ್ಮ ನಾಯಕನನ್ನು ಆ ಆಟಗಾರನಿರುವವರೆಗೂ ನೀವು ಬದಲಾಯಿಸಬಹುದು. ನಾಯಕನ ಬದಲಾವಣೆಯಿಂದಾಗಿ ನಿಮ್ಮ ಯಾವುದೇ ಪರ್ಯಾಯಗಳನ್ನು ನೀವು ಕಳೆದುಕೊಳ್ಳುವುದಿಲ್ಲ.
 • ದಿನದಲ್ಲಿ ಉತ್ತಮ ಪ್ರದರ್ಶನ ತೋರುವ 3 ತಂಡಗಳು ದೈನಂದಿನ ಬಹುಮಾನಗಳನ್ನು ಮತ್ತು ಪಂದ್ಯವಳಿಯಾದ್ಯಂತ ಉತ್ತಮ ಪ್ರದರ್ಶನ ತೋರುವ 3 ತಂಡಗಳು ಒಟ್ಟಾರೆ ಬಹುಮಾನಗಳನ್ನು ಪಡೆದುಕೊಳ್ಳುತ್ತಾರೆ.
 • ಪಂದ್ಯವು ಟೈ ಆದ ಸಂದರ್ಭದಲ್ಲಿ, ಈ ಕೆಳಗಿನ ನಿರ್ದಿಷ್ಟ ಕ್ರಮದಲ್ಲಿ ಟೈ-ಬ್ರೇಕರ್‌ಗಳನ್ನು ಬಳಸಲಾಗುತ್ತದೆ:
  • ಕಡಿಮೆ ಬಳಸಲಾದ ಬಜೆಟ್
  • ಕಡಿಮೆ ಬಳಸಲಾದ ಪರ್ಯಾಯಗಳ ಸಂಖ್ಯೆ
  • ಮೊದಲು ರಚಿಸಲಾದ ತಂಡ (ತಂಡವನ್ನು ಉಳಿಸಿದ ಸಮಯದ ಅನುಸಾರ)
  • ಟೈ ಮುಂದುವರಿದರೆ, ವಿಜೇತರನ್ನು ಘೋಷಿಸಲು ರಾಂಡಮ್ ಪಿಕ್ಕರ್ ಅನ್ನು ಬಳಸಲಾಗುತ್ತದೆ